Wednesday, 19 February 2020

Ondu Malebillu – Chakravarthy


ಒಂದು ಮಳೆಬಿಲ್ಲು 













ಒಂದು ಮಳೆಬಿಲ್ಲು ಒಂದು ಮಳೆಮೋಡ
ಹೇಗೋ ಜೊತೆಯಾಗಿ ತುಂಬಾ ಸೊಗಸಾಗಿ
ಏನನೋ ಮಾತಾಡಿವೆ ಭಾವನೆ ಬಾಕಿ ಇದೆ
ತೇಲಿ ನೂರಾರು ಮೈಲಿಯು ಸೇರಲು ಸನಿ ಸನಿಹ
ಮೋಡ ಸಾಗಿ ಬಂದಿದೆ ಪ್ರೀತಿಗೆ
ಮುದ್ದಾಗಿ ಸೇರಿವೆ ಎರಡು ಸಹ
ಏನನೋ ಮಾತಾಡಿವೆ ಭಾವನೆ ಬಾಕಿ ಇವೆ
ಒಂದು ಮಳೆಬಿಲ್ಲು ಒಂದು ಮಳೆಮೋಡ
ಹೇಗೋ ಜೊತೆಯಾಗಿ ತುಂಬಾ ಸೊಗಸಾಗಿ

ಸನ್ನೆಗಳಿಗೆ ಸೋತ ಕಣ್ಣುಗಳಿವೆ
ಕದ್ದು ಕೊಡುವುದಕೆ ಕಾದ ಮುತ್ತುಗಳಿವೆ
ಬೆರಳುಗಳು ಸ್ಪರ್ಶ ಬಯಸುತಿವೆ
ಮನದ ಒಳಗೊಳಗೇ ಎಷ್ಟೋ ಆಸೆಗಳಿವೆ
ಎಂಥಾ ಆವೇಗ ಈ ತವಕ
ಸೇರೋ ಸಲುವಾಗಿ ಎಲ್ಲಾ ಅತಿಯಾಗಿ
ಎಲ್ಲೂ ನೋಡಿಲ್ಲ ಈ ತನಕ
ಪ್ರೀತಿಗೆ ಒಂದ್ ಹೆಜ್ಜೆ ಮುಂದಾಗಿವೆ

ಏನನೋ ಮಾತಾಡಿವೆ ಯಾತಕೆ ಹೀಗಾಗಿದೆ
ಒಂದು ಮಳೆಬಿಲ್ಲು ಒಂದು ಮಳೆಮೋಡ

ನಾಚುತಲಿವೆ ಯಾಕೋ ಕೈಯ್ಯ ಬಳೆ
ಮಂಚ ನೋಡುತಿದೆ ಬೀಳೋ ಬೆವರ ಮಳೆ
ಬೆಚ್ಚಗೆ ಇದೆ ನೆಟ್ಟ ಉಸಿರ ಬೆಳೆ
ದೀಪ ಮಲಗುತಿದೆ ನೋಡಿ ಈ ರಗಳೆ
ತುಂಬಾ ಹೊಸದಾದ ಈ ಕಥನ
ಒಮ್ಮೆ ನಿಶಬ್ಧ ಒಮ್ಮೆ ಸಿಹಿಯುದ್ಧ
ಎಲ್ಲೂ ಕೇಳಿಲ್ಲ ಈ ಮಿಥುನ
ಪ್ರೀತಿಲಿ ಈ ಜೀವ ಒಂದಾಗಿವೆ

ಏನನೋ...
ಮಾತಲೇ ಮುದ್ದಾಡಿವೆ
ಒಂದು ಮಳೆಬಿಲ್ಲು ಒಂದು ಮಳೆಮೋಡ
ಹೇಗೋ ಜೊತೆಯಾಗಿ ತುಂಬಾ ಸೊಗಸಾಗಿ
ಏನನೋ ಮಾತಾಡಿವೆ ಭಾವನೆ ಬಾಕಿ ಇದೆ

No comments:

Post a Comment