Wednesday, 18 March 2020

Oo Bandalo Bandalo Kanchana

ಓ ಬಂದಳೋ ಬಂದಳೋ ಕಾಂಚನ

ಹೇ ಹೇ ಹೇ ಹೇ ಹೇ...
ಓ ಓ ಓ ಓ ಓ ಓ...
ಓ ಬಂದಳೋ ಬಂದಳೋ ಕಾಂಚನ
ಕಾಂಚನಾ ಕಾಂಚನ
ಹೇ ಜಂಬವೆ ಇವಳಿಗೆ ಲಾಂಛನ
ಲಾಂಛನಾ ಲಾಂಛನ
ಓ ಅಂದದ ಬೊಂಬೆ ನೀನು
ಕೋಪದಲ್ಲಿ ಮಿಂಚುವ ರಾಣಿಜೇನು
ಈ ಅಂದದ ಮೇಲೆ ನಾನು
ರಾಗದಲಿ ಹಾಡುವೆ ಕೇಳು ನೀನು
ಓ ಕಾಂಚನಾ ಹಾ ಹಾ ಹಾ
ನಿನ್ನ ಮೇಲೆ ಒಂದು ಕವನ

ಓ ಬಂದಳೋ ಬಂದಳೋ ಕಾಂಚನ
ಕಾಂಚನಾ ಕಾಂಚನ
ಹೇ ಜಂಬವೆ ಇವಳಿಗೆ ಲಾಂಛನ
ಲಾಂಛನಾ ಲಾಂಛನ

ಪುಂಡರ ಊರಲಿ ಚಿರತೆಯ ಹಾಗಿರು
ನೀನು ಕಣ್ ಬಿಟ್ಟೊಡೆ ಭೂಕಂಪವೇ ಎಲ್ಲ ಕಡೆ
ವೀರರ ಬೀಡಲಿ ವಿಜಯದ ಹಾಗಿರು
ನೀನು ನಗುತಿದ್ದೊಡೆ ಆನಂದವೇ ಎಲ್ಲ ಕಡೆ
ಹೆಣ್ಣೆಂದರೆ ಕಡೆ ಅನ್ನೋಕಾಲ
ಬದಲಾಯಿತೇ ವೈಜಯಂತಿ ಮಾಲಾ
ಇನ್ನು ನಿನಗೆ ನೀನೆ ರಕ್ಷೆ ಬಾಲೆ
ನಾನು ಹೋಗಿ ಬರಲೇ

ಓ ಓ ಊರಿಗೆಲ್ಲ ಇವನೇ ಒಬ್ಬ ಶೂರ
ಹೋಗಿ ಬಾರೋ ತರಲೆ
ಓ ಬಂದಳೋ ಬಂದಳೋ ಕಾಂಚನ
ಕಾಂಚನಾ ಕಾಂಚನ
ಹೇ ಜಂಬವೆ ಇವಳಿಗೆ ಲಾಂಛನ
ಲಾಂಛನಾ ಲಾಂಛನಾ...

ಮದುವೆಯ ಮನೆಯಲಿ ವಧುವು ನೀನಾಗಿರು
ಹಾಳು ವರದಕ್ಷಿಣೆ ಬೇಕೆಂದರೆ ಹುಲಿಯಾಗಿರು
ಬಡವರ ನಾಡಲಿ ನಗುವ ತಾಯಾಗಿರು
ಯಾರು ಏನೆಂದರೂ ಮಿತಿಮೀರದೇ ಎರಡೇ ಹೆರು
ಇಪ್ಪತ್ತನೇ ಶತಮಾನದಲ್ಲಿ
ನಾನೊಬ್ಬನೇ ಸರದಾರನಿಲ್ಲಿ

ಹೆಣ್ಣು ಮನೆಯ ಕಣ್ಣು ಎಂದು ತಿಳಿದ
ರೌಡಿ ರಾಮ ನಾನು ಹಾ ಹಾ
ಅಯ್ಯೋ ರಾಮ ರಾಮ ಕೃಷ್ಣ ಪ್ರಭುವೇ
ಮೊದಲು ತೊಲಗು ನೀನು
ಅರೆ ಬಂದಳೋ ಬಂದಳೋ ಕಾಂಚನ
ಕಾಂಚನಾ ಕಾಂಚನ
ಹೇ ಜಂಬವೆ ಇವಳಿಗೆ ಲಾಂಛನ
ಲಾಂಛನಾ ಲಾಂಛನ
ಓ ಅಂದದ ಬೊಂಬೆ ನೀನು
ಕೋಪದಲ್ಲಿ ಮಿಂಚುವ ರಾಣಿಜೇನು
ಈ ಅಂದದ ಮೇಲೆ ನಾನು
ರಾಗದಲಿ ಹಾಡುವೆ ಕೇಳು ನೀನು
ಓ ಕಾಂಚನಾ ಹಾ ಹಾ ಹಾ
ನಿನ್ನ ಮೇಲೆ ಒಂದು ಕವನ

Kelade Nimageega

ಕೇಳದೇ ನಿಮಗೀಗ ದೂರದಲ್ಲಿ ಯಾರೋ

ಕೇಳದೇ ನಿಮಗೀಗ ದೂರದಲ್ಲಿ ಯಾರೋ
ಹಾಡು ಹೇಳಿದಂತೇ....ಒಂದು ಹೆಣ್ಣಿನ
ಓ... ನೊಂದ ವಿರಹ ಗೀತೆ
ಕೇಳದೇ ನಿಮಗೀಗ ದೂರದಲ್ಲಿ ಯಾರೋ

ಸಂಪಿಗೆ ಒಂದೂರು, ಮಲ್ಲಿಗೆ ಒಂದೂರು
ನಡುವಲ್ಲಿ ನದಿಯೊಂದು
ಹಗ್ಗದ ಉಯ್ಯಾಲೆ, ತೂಗುವ ಹಾಗೊಂದು
ಸೇತುವೆಯು ಅಲ್ಲೊಂದು
ಈ ಊರ ಚೆಲುವೆ, ಆ ಊರ ಚೆಲುವ
ನದಿಯಂಚಲಿ ಓಡಾಡುತಾ ಎದುರಾದರು ಒಮ್ಮೆ
ಕೇಳದೇ ನಿಮಗೀಗ ದೂರದಲ್ಲಿ ಯಾರೋ.......


ಚೆಲುವೆಯ ಕಂಡಾಗ, ಚೆಲುವನ ಮನದಲ್ಲಿ
ನೂರಾಸೆ ಬಂದಾಗ
ಚೆಲುವೆಯ ಕಣ್ಣಲ್ಲಿ, ಚೆಲುವನು ಮನೆ ಮಾಡಿ
ಶಿಲೆಯಂತೆ ನಿಂತಾಗ
ಹೂವಾಗಿ ಮನಸು ನೂರಾರು ಕನಸು
ಬೆರಗಾದರು ಒಲವಿಂದಲಿ ಒಂದಾದರು ಆಗ
ಕೇಳದೇ ನಿಮಗೀಗ ದೂರದಲ್ಲಿ ಯಾರೋ

ಈ ಊರಿನ ಜನಕ್ಕೂ, ಆ ಊರಿನ ಜನಕ್ಕೂ
ಹಿಂದಿನಿಂದ ದ್ವೇಷ
ಒಬ್ಬರನೊಬ್ಬರು ಕೊಲ್ಲೋಷ್ಟು ಆಕ್ರೋಶ
ಹೀಗಿದ್ರೂ ಆ ಪ್ರೇಮಿಗಳು ಹೆದರಲಿಲ್ಲ
ದಿನಾ ರಾತ್ರಿ ಊರೆಲ್ಲ ಮಲಗಿದ್ಮೇಲೆ
ಹಗ್ಗದ ಸೇತು ಮೇಲೆ ಇಬ್ಬರು ಸೇರ್ತಿದ್ರು

ಚೆಲುವೆಯ ಮಾವಯ್ಯ ಒಲವಿನ ಕಥೆ ಕೇಳಿ
ಹುಲಿಯಂತೆ ಎಗರಾಡಿ
ಸೇತುವೆ ಬಳಿ ಬಂದಾಗ ಪ್ರೇಮಿಗಳ ಕಂಡಾಗ
ರೋಷದಲಿ ಕೂಗಾಡಿ
ಹಲ್ಲನ್ನೂ ಮಸೆದ ಸೇತುವೆಯಾ ಕಡಿದ
ಆ ಜೋಡಿಯ ಕಥೆಯಂದಿಗೆ ಕೊನೆಯಾಯಿತು ಹೀಗೆ
ಕೇಳದೇ ನಿಮಗೀಗ ದೂರದಲ್ಲಿ ಯಾರೋ

ANISUTHIDE YAKO INDU

ಅನಿಸುತಿದೆ ಯಾಕೋ ಇಂದು

ಅನಿಸುತಿದೆ ಯಾಕೋ ಇಂದು
ನೀನೇನೆ ನನ್ನವಳೆಂದು
ಮಾಯದ ಲೋಕದಿಂದ
ನನಗಾಗೆ ಬಂದವಳೆಂದು
ಆಹಾ ಎಂತ ಮಧುರ ಯಾತನೇ..!
ಕೊಲ್ಲು ಹುಡುಗಿ ಒಮ್ಮೆ ನನ್ನ....ಹಾಗೆ ಸುಮ್ಮನೇ...
ಅನಿಸುತಿದೆ ಯಾಕೋ ಇಂದು...

ಸುರಿಯುವ ಸೋನೆಯೂ
ಸೂಸಿದೆ ನಿನ್ನದೆ ಪರಿಮಳ
ನ್ನ ಯಾರ ಕನಸಲೂ
ನೀನು ಹೋದರೆ ತಳಮಳ
ಪೂರ್ಣ ಚಂದಿರ ರಜಾ ಹಾಕಿದ
ನಿನ್ನಯ ಮೊಗವನು ಕಂಡ ಕ್ಷಣ
ನಾ ಖೈದಿ ನೀನೆ ಸೆರೆಮನೆ
ತಬ್ಬಿ ನನ್ನ ಅಪ್ಪಿಕೊ ಒಮ್ಮೆ...ಹಾಗೆ ಸುಮ್ಮನೇ...
ಅನಿಸುತಿದೆ ಯಾಕೋ ಇಂದು...

ತುಟಿಗಳ ಹೂವಲಿ
ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲಿ
ಕೇವಲ ನಿನ್ನದೆ ಸಹಿಯಿದೆ
ಹಣೆಯಲಿ ಬರೆಯದ ನಿನ್ನ ಹೆಸರ
ಹೃದಯದಿ ನಾನೆ ಕೊರೆದಿರುವೆ
ನಿನಗುಂಟೆ ಇದರ ಕಲ್ಪನೆ...
ನನ್ನ ಹೆಸರ ಕೂಗೆ ಒಮ್ಮೆ...ಹಾಗೆ ಸುಮ್ಮನೆ...
ಅನಿಸುತಿದೆ ಯಾಕೋ ಇಂದು...
ನೀನೇನೆ ನನ್ನವಳೆಂದು...
ಮಾಯದ ಲೋಕದಿಂದ
ನನಗಾಗೆ ಬಂದವಳೆಂದು
ಆಹಾ ಎಂತ ಮಧುರ ಯಾತನೇ....!
ಕೊಲ್ಲು ಹುಡುಗಿ ಒಮ್ಮೆ ನನ್ನ...ಹಾಗೆ ಸುಮ್ಮನೆ...
ಅನಿಸುತಿದೆ ಯಾಕೋ ಇಂದು.....

Thursday, 20 February 2020

ELLELLO ODUVA MANASE - SIDLINGU


ಎಲ್ಲೆಲ್ಲೊ ಓಡುವ ಮನಸೇ 














ಎಲ್ಲೆಲ್ಲೊ ಓಡುವ ಮನಸೇ
ಯಾಕಿಂತ ಹುಚ್ಚುಚ್ಚು ವರಸೆ
ಇಲ್ಲದ ಸಲ್ಲದ ತರಲೆ
ಹೋದಲ್ಲಿ ಬಂದಲ್ಲಿ ತರವೆ
ಹರುಷವ ಮುಂದಿಡುವೆ
ವ್ಯಸನವ ಬೆಂಬಿಡುವೆ
ಬಂದರೂ ಅಳುವು ನಗಿಸಿ ನಲಿವ ಮನವೇ
ನಾನು ನನ್ನದೆನ್ನುವ ನಿನ್ನಯ ತರ್ಕವೇ ಬಾಲಿಷ
ಎಲ್ಲಾ ಶೂನ್ಯವೆನ್ನುವ ನಿನ್ನಯ ವರ್ಗವೇ ಅಂಕುಶ
ಕಲ್ಮಶ ನಿಷ್ಕಲ್ಮಶ ತರ ತರ ನಿನ್ನ ವೇಷ
ದ್ವಾದಶಿ ಏಕಾದಶಿ ಎಲ್ಲಾ ನಿನ್ನಾ ಖುಷಿ
ಇದ್ದರು ಜೊತೆಗೆ ದೂರ ಇರುವ ಮನವೇ

ಎಲ್ಲೆಲ್ಲೊ ಓಡುವ ಮನಸೇ
ಯಾಕಿಂತ ಹುಚ್ಚುಚ್ಚು ವರಸೆ
ಇಲ್ಲದ ಸಲ್ಲದ ತರಲೆ
 ಹೋದಲ್ಲಿ ಬಂದಲ್ಲಿ ತರವೆ

ಬೇಕು ಬೇಡ ಎನ್ನುವ ಗೊಂದಲ ಸೃಷ್ಠಿಸೊ ಮಾಯೆ ನೀ
ತಪ್ಪು ಒಪ್ಪು ಎಲ್ಲವ ತೋರುವ ಕಾಣದ ಛಾಯೆ ನೀ
ಕಲ್ಪನೆ ಪರಿಕಲ್ಪನೆ ವಿಧ ವಿಧ ನಿನ್ನ ತಾಣ
ಬಣ್ಣನೆ ಬದಲಾವಣೆ ಎಲ್ಲಾ ನಿನ್ನಾ ಹೊಣೆ
ಕಂಡರೂ ಸಾವು ಬದುಕು ಎನುವ ಮನವೇ

ಎಲ್ಲೆಲ್ಲೊ ಓಡುವ ಮನಸೇ


Wednesday, 19 February 2020

Upavasa Ee Kannige – Mr.&Mrs. Ramachari


 ಉಪವಾಸ ಈ ಕಣ್ಣಿಗೆ













ಉಪವಾಸ ಈ ಕಣ್ಣಿಗೆ ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ ಈಗ ಅರೆಘಳಿಗೆ ದೂರ ನೀ ನಿಂತರೆ...
ಪ್ರೀತಿ ಎಂದರೆ ಇಂಥ ತೊಂದರೆ ತೀರಾ ಸಹಜ ಬಿಡು
ನನ್ನಲ್ಲೂ ಹೀಗೆ ಆಗಿದೆ ಏನು ಮಾಡುವುದು
ಎಲ್ಲಿ ಹೋದರು ಎಲ್ಲಿ ಬಂದರು ನಿನ್ನದೇ ಅಮಲು
ವಿರಾಮ ನೀಡುತ್ತಿಲ್ಲ ಯಾರಿಗ್ ಹೇಳುವುದು
ಉಪವಾಸ ಈ ಕಣ್ಣಿಗೆ ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ ಈಗಾ ಅರೆಘಳಿಗೆ ದೂರ ನೀ ನಿಂತರೆ

ಸೇರು ನನ್ನ ತೋಳಿಗೆ ಚಿಂತೆ ತೂರಿ ಗಾಳಿಗೆ
ನನ್ನ ನೆರಳಿಗೆ ಈಗ ನಿನ್ನ ನೆರಳು ಅಂಟಿರಬೇಕು
ಕೈಯ್ಯ ಬೆರಳಿಗೆ ಬೇಗ ನಿನ್ನ ಮುಂಗುರುಳು ಸಿಗಬೇಕು
ಪ್ರಣಯದ ಪಯಣವಿದು ನಿನ್ನಿಂದಲೇ ಆರಂಭ
ನಿಂತಲ್ಲೆ ಕರಗುತ ನಾ ನೀರಾಗೋ ಸಂದರ್ಭ
ನೀ ನನ್ನವಳೆನ್ನುವ ಅಂಶ ಸಾಕು ಹೃದಯಕೆ ಒಣ ಜಂಬ
ಹೇಗೆ ಮೂಡಿತು ಹೇಗೆ ಮಾಗಿತು ಹುಚ್ಚು ಪ್ರೀತಿ ಇದು
ನನ್ನಲ್ಲಿ ನಾನೇ ಇಲ್ಲ ಎಲ್ಲಿ ಹುಡುಕುವುದು
ಮಾತು ಮಾತಿಗೂ ನಿನ್ನ ಸೆಳೆತವೇ ಜೀವ ಹಿಂಡಿರಲು
ನಿನ್ನಿಂದ ತುಂಬ ಕಷ್ಟ ದೂರ ಉಳಿಯುವುದು
ಉಪವಾಸ ಈ ಕಣ್ಣಿಗೆ ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ ಈಗಾ ಅರೆಘಳಿಗೆ ದೂರ ನೀ ನಿಂತರೆ

ಒಂಟಿ ಅಲ್ಲ ನಾ ಎಂದಿಗೂ ಇನ್ನು ಮುಂದೆ ಈ ಬಾಳಲಿ
ತುಂಬ ಮುದ್ದು ಮಾಡೋ ಒಂದು ಜೀವ ಈಗ ಸ್ವಂತ
ತಲುಪೆ ಬಿಟ್ಟೆ ನಾನು ದಾರಿಲಿ ತೇಲೋ ಅಂತ
ಇದು ಬಹು ಜನುಮಗಳ ಅನುಬಂಧವೇ ಸರಿ
ಪ್ರತಿ ಜನುಮಕು ಹೀಗೆ ನೀ ನೀಡು ಹಾಜರಿ
ನವಿರಾದ ಪ್ರೀತಿ ಸಾಲನು ಹಣೆಯಲಿ ನೀನು ಬರಿ
ನೀನು ಇಲ್ಲದೆ ನಾನು ಇರುವುದು ಯಾವ ಸುಖಕ್ಕಾಗಿ
ಪ್ರೀತಿಸು ಎಂದು ಹೀಗೆ ಲೋಕ ಮರೆತೋಗಿ
ಏನೆ ಆಗಲಿ ಏನೆ ಹೋಗಲಿ ನನ್ನ ಹೃದಯವಿದು
ನಿನ್ನದೇ ಇಲ್ಲ ಸಂಶಯ ನಾನು ನಿನಗಾಗಿ
ಉಪವಾಸ ಈ ಕಣ್ಣಿಗೆ ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ ಈಗಾ ಅರೆಘಳಿಗೆ ದೂರ ನೀ ನಿಂತರೆ

Ondu Malebillu – Chakravarthy


ಒಂದು ಮಳೆಬಿಲ್ಲು 













ಒಂದು ಮಳೆಬಿಲ್ಲು ಒಂದು ಮಳೆಮೋಡ
ಹೇಗೋ ಜೊತೆಯಾಗಿ ತುಂಬಾ ಸೊಗಸಾಗಿ
ಏನನೋ ಮಾತಾಡಿವೆ ಭಾವನೆ ಬಾಕಿ ಇದೆ
ತೇಲಿ ನೂರಾರು ಮೈಲಿಯು ಸೇರಲು ಸನಿ ಸನಿಹ
ಮೋಡ ಸಾಗಿ ಬಂದಿದೆ ಪ್ರೀತಿಗೆ
ಮುದ್ದಾಗಿ ಸೇರಿವೆ ಎರಡು ಸಹ
ಏನನೋ ಮಾತಾಡಿವೆ ಭಾವನೆ ಬಾಕಿ ಇವೆ
ಒಂದು ಮಳೆಬಿಲ್ಲು ಒಂದು ಮಳೆಮೋಡ
ಹೇಗೋ ಜೊತೆಯಾಗಿ ತುಂಬಾ ಸೊಗಸಾಗಿ

ಸನ್ನೆಗಳಿಗೆ ಸೋತ ಕಣ್ಣುಗಳಿವೆ
ಕದ್ದು ಕೊಡುವುದಕೆ ಕಾದ ಮುತ್ತುಗಳಿವೆ
ಬೆರಳುಗಳು ಸ್ಪರ್ಶ ಬಯಸುತಿವೆ
ಮನದ ಒಳಗೊಳಗೇ ಎಷ್ಟೋ ಆಸೆಗಳಿವೆ
ಎಂಥಾ ಆವೇಗ ಈ ತವಕ
ಸೇರೋ ಸಲುವಾಗಿ ಎಲ್ಲಾ ಅತಿಯಾಗಿ
ಎಲ್ಲೂ ನೋಡಿಲ್ಲ ಈ ತನಕ
ಪ್ರೀತಿಗೆ ಒಂದ್ ಹೆಜ್ಜೆ ಮುಂದಾಗಿವೆ

ಏನನೋ ಮಾತಾಡಿವೆ ಯಾತಕೆ ಹೀಗಾಗಿದೆ
ಒಂದು ಮಳೆಬಿಲ್ಲು ಒಂದು ಮಳೆಮೋಡ

ನಾಚುತಲಿವೆ ಯಾಕೋ ಕೈಯ್ಯ ಬಳೆ
ಮಂಚ ನೋಡುತಿದೆ ಬೀಳೋ ಬೆವರ ಮಳೆ
ಬೆಚ್ಚಗೆ ಇದೆ ನೆಟ್ಟ ಉಸಿರ ಬೆಳೆ
ದೀಪ ಮಲಗುತಿದೆ ನೋಡಿ ಈ ರಗಳೆ
ತುಂಬಾ ಹೊಸದಾದ ಈ ಕಥನ
ಒಮ್ಮೆ ನಿಶಬ್ಧ ಒಮ್ಮೆ ಸಿಹಿಯುದ್ಧ
ಎಲ್ಲೂ ಕೇಳಿಲ್ಲ ಈ ಮಿಥುನ
ಪ್ರೀತಿಲಿ ಈ ಜೀವ ಒಂದಾಗಿವೆ

ಏನನೋ...
ಮಾತಲೇ ಮುದ್ದಾಡಿವೆ
ಒಂದು ಮಳೆಬಿಲ್ಲು ಒಂದು ಮಳೆಮೋಡ
ಹೇಗೋ ಜೊತೆಯಾಗಿ ತುಂಬಾ ಸೊಗಸಾಗಿ
ಏನನೋ ಮಾತಾಡಿವೆ ಭಾವನೆ ಬಾಕಿ ಇದೆ

Tuesday, 18 February 2020

Jote Jotheyali – Geetha


ಜೊತೆಯಲಿ ಜೊತೆ ಜೊತೆಯಲಿ














ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು
ಜೊತೆ ಜೊತೆಯಲಿ ಇರುವೆನು ಹೀಗೆ ಎಂದು
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು
ಹೊಸ ಹರುಷವ ತರವೆನು ಇನ್ನು ಎಂದು
ಓ.... ಎಂಥ ಮಾತಾಡಿದೆ ಇಂದು ನೀ
ಎಂಥ ಮಾತಾಡಿದೆ ನನ್ನ ಮನಸಿನ ಭಾವನೆ ನೀನೆ ಹೇಳಿದೆ
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು

ಪ್ರೀತಿಯೆಂದರೇನು ಎಂದು ಈಗ ಅರಿತೆನು
ಪ್ರೀತಿಯೆಂದರೇನು ಎಂದು ಈಗ ಅರಿತೆನು
ಸವಿ ನುಡಿಯಲಿ ತನು ಅರಳಿತು ಸವಿಗನಸಲಿ ಮನ ಕುಣಿಯಿತು
ಒಲವಿನ ಈ ಮಾತಿಗೆ ಕರಗಿಹೋದೆ ನೋಟಕೆ
ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ.....

ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು

ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ
ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ
ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ
ಕಾಮನ ಬಿಲ್ಲೇರುವ ಜಾರುತನಾವಾಡುವ
ಹಗಲು ಇರುಳು ಒಂದಾಗಿ ಹಾಡುವ...

ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು
ಹೊಸ ಹರುಷವ ತರವೆನು ಇನ್ನು ಎಂದು
ಎಂಥ ಮಾತಾಡಿದೆ ಇಂದು ನೀ
ಎಂಥ ಮಾತಾಡಿದೆ ನನ್ನ ಮನಸಿನ ಭಾವನೆ ನೀನೆ ಹೇಳಿದೆ
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು