ಓ ಬಂದಳೋ ಬಂದಳೋ ಕಾಂಚನ
ಹೇ ಹೇ ಹೇ ಹೇ ಹೇ...
ಓ ಓ ಓ ಓ ಓ ಓ...
ಓ ಬಂದಳೋ ಬಂದಳೋ ಕಾಂಚನ
ಕಾಂಚನಾ ಕಾಂಚನ
ಹೇ ಜಂಬವೆ ಇವಳಿಗೆ ಲಾಂಛನ
ಲಾಂಛನಾ ಲಾಂಛನ
ಓ ಅಂದದ ಬೊಂಬೆ ನೀನು
ಕೋಪದಲ್ಲಿ ಮಿಂಚುವ ರಾಣಿಜೇನು
ಈ ಅಂದದ ಮೇಲೆ ನಾನು
ರಾಗದಲಿ ಹಾಡುವೆ ಕೇಳು ನೀನು
ಓ ಕಾಂಚನಾ ಹಾ ಹಾ ಹಾ
ನಿನ್ನ ಮೇಲೆ ಒಂದು ಕವನ
ಓ ಬಂದಳೋ ಬಂದಳೋ ಕಾಂಚನ
ಕಾಂಚನಾ ಕಾಂಚನ
ಹೇ ಜಂಬವೆ ಇವಳಿಗೆ ಲಾಂಛನ
ಲಾಂಛನಾ ಲಾಂಛನ
ಪುಂಡರ ಊರಲಿ ಚಿರತೆಯ ಹಾಗಿರು
ನೀನು ಕಣ್ ಬಿಟ್ಟೊಡೆ ಭೂಕಂಪವೇ ಎಲ್ಲ ಕಡೆ
ವೀರರ ಬೀಡಲಿ ವಿಜಯದ ಹಾಗಿರು
ನೀನು ನಗುತಿದ್ದೊಡೆ ಆನಂದವೇ ಎಲ್ಲ ಕಡೆ
ಹೆಣ್ಣೆಂದರೆ ಕಡೆ ಅನ್ನೋಕಾಲ
ಬದಲಾಯಿತೇ ವೈಜಯಂತಿ ಮಾಲಾ
ಇನ್ನು ನಿನಗೆ ನೀನೆ ರಕ್ಷೆ ಬಾಲೆ
ನಾನು ಹೋಗಿ ಬರಲೇ
ಓ ಓ ಊರಿಗೆಲ್ಲ ಇವನೇ ಒಬ್ಬ ಶೂರ
ಹೋಗಿ ಬಾರೋ ತರಲೆ
ಓ ಬಂದಳೋ ಬಂದಳೋ ಕಾಂಚನ
ಕಾಂಚನಾ ಕಾಂಚನ
ಹೇ ಜಂಬವೆ ಇವಳಿಗೆ ಲಾಂಛನ
ಲಾಂಛನಾ ಲಾಂಛನಾ...
ಮದುವೆಯ ಮನೆಯಲಿ ವಧುವು ನೀನಾಗಿರು
ಹಾಳು ವರದಕ್ಷಿಣೆ ಬೇಕೆಂದರೆ ಹುಲಿಯಾಗಿರು
ಬಡವರ ನಾಡಲಿ ನಗುವ ತಾಯಾಗಿರು
ಯಾರು ಏನೆಂದರೂ ಮಿತಿಮೀರದೇ ಎರಡೇ ಹೆರು
ಇಪ್ಪತ್ತನೇ ಶತಮಾನದಲ್ಲಿ
ನಾನೊಬ್ಬನೇ ಸರದಾರನಿಲ್ಲಿ
ಹೆಣ್ಣು ಮನೆಯ ಕಣ್ಣು ಎಂದು ತಿಳಿದ
ರೌಡಿ ರಾಮ ನಾನು ಹಾ ಹಾ
ಅಯ್ಯೋ ರಾಮ ರಾಮ ಕೃಷ್ಣ ಪ್ರಭುವೇ
ಮೊದಲು ತೊಲಗು ನೀನು
ಅರೆ ಬಂದಳೋ ಬಂದಳೋ ಕಾಂಚನ
ಕಾಂಚನಾ ಕಾಂಚನ
ಹೇ ಜಂಬವೆ ಇವಳಿಗೆ ಲಾಂಛನ
ಲಾಂಛನಾ ಲಾಂಛನ
ಓ ಅಂದದ ಬೊಂಬೆ ನೀನು
ಕೋಪದಲ್ಲಿ ಮಿಂಚುವ ರಾಣಿಜೇನು
ಈ ಅಂದದ ಮೇಲೆ ನಾನು
ರಾಗದಲಿ ಹಾಡುವೆ ಕೇಳು ನೀನು
ಓ ಕಾಂಚನಾ ಹಾ ಹಾ ಹಾ
ನಿನ್ನ ಮೇಲೆ ಒಂದು ಕವನ